Skip to content

Commit

Permalink
Adding kn/2024-04/01-02
Browse files Browse the repository at this point in the history
  • Loading branch information
VitalikL committed Sep 30, 2024
1 parent 2a20f72 commit 63028c3
Show file tree
Hide file tree
Showing 107 changed files with 979 additions and 0 deletions.
18 changes: 18 additions & 0 deletions src/kn/2024-04/01/01.md
Original file line number Diff line number Diff line change
@@ -0,0 +1,18 @@
---
title: ಮಾರ್ಗ ತೋರಿಸುವ ಸೂಚಕ ಕಾರ್ಯಗಳು
date: 28/09/2024
---

### ಈ ಪಾಠದ ಅಧ್ಯಯನಕ್ಕಾಗಿ
ಯೋಹಾನ 2:1-11; 4:46-54; 5:1-47; ಮಾರ್ಕ 3:22,23 ಹಾಗೂ ಮತ್ತಾಯ 12:9-14ನೇ ವಚನಗಳನ್ನು ಓದಿರಿ.

> <p>ಸ್ಮರಣವಾಕ್ಯ</p>
> "ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳು ಈ ಗ್ರಂಥದಲ್ಲಿ ಬರೆದಿರುವುದಿಲ್ಲ. ಆದರೆ ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದಿದೆ" (ಯೋಹಾನ 20:30,31).
ಯೋಹಾನನು ಯಾಕೆ ಈ ಸುವಾರ್ತೆಯನ್ನು ಬರೆದನು? ಯೇಸುಸ್ವಾಮಿ ಮಾಡಿದ ಅದ್ಭುತ ಕಾರ್ಯಗಳು ಅಥವಾ ಕೆಲವು ನಿರ್ದಿಷ್ಟವಾದ ಆತನ ಬೋಧನೆಗಳನ್ನು ಒತ್ತಿಹೇಳುವುದಕ್ಕೆ ಅವನು ಇಚ್ಛಿಸಿದ್ದನೇ? ಯೇಸುವಿನ ಪ್ರಿಯ ಶಿಷ್ಯನಾದ ಯೋಹಾನನು ಆತನು ಮಾಡಿದ್ದನ್ನು ಬರೆಯುವುದಕ್ಕೆ ಕಾರಣವಾದರೂ ಏನು?

ಪರಿಶುದ್ಧಾತ್ಮನ ಬಲ ಹಾಗೂ ಪ್ರಭಾವದಿಂದ ಯೋಹಾನನು ಇದನ್ನು ವಿವರಿಸಿ ಹೇಳುತ್ತಾನೆ. ಯೇಸುಕ್ರಿಸ್ತನ ಜೀವಿತ ಹಾಗೂ ಆತನು ಮಾಡಿದ್ದ ಕಾರ್ಯಗಳ ಬಗ್ಗೆ ಇನ್ನೂ ಬರೆಯಬಹುದಾಗಿತ್ತೆಂದು ಯೋಹಾನನು ತಿಳಿಸುತ್ತಾನೆ (ಯೋಹಾನ 21:25). ಆದರೆ ಯೇಸು ದೇವಕುಮಾರನಾದ ಕ್ರಿಸ್ತನೆಂದು ನಾವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಯೋಹಾನನು ಇದನ್ನು ಬರೆದಿದ್ದಾನೆ (ಯೋಹಾನ 20:31).

ಈ ವಾರ ನಾವು ಯೇಸುಸ್ವಾಮಿಯು ತನ್ನ ಸುವಾರ್ತಾ ಸೇವೆಯ ಆರಂಭದಲ್ಲಿ ಕಾನಾ ಊರಿನಲ್ಲಿ ಮದುವೆಯಲ್ಲಿ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು, ಕಪೆರ್ನೌಮಿನಲ್ಲಿ ಬಹಳ ಅಸ್ವಸ್ಥನಾಗಿ ಸಾಯುವ ಸ್ಥಿತಿಯಲ್ಲಿದ್ದ ಅರಮನೆಯ ಪ್ರಧಾನನ ಮಗನನ್ನು ಗುಣಪಡಿಸಿದ್ದು (ಯೋಹಾನ 4:48-54) ಹಾಗೂ 38 ವರುಷ ರೋಗಿಯಾಗಿದ್ದ ವ್ಯಕ್ತಿಯನ್ನು ಬೇತ್ಸಾಯದ ಅಥವಾ ಬೇತ್ಸೆಥಾ ಎಂಬ ಕೊಳದ ಬಳಿಯಲ್ಲಿ ವಾಸಿ ಮಾಡಿದ್ದು, ಇವುಗಳ ಬಗ್ಗೆ ಕಲಿಯೋಣ.

ಯೋಹಾನನು ಈ ಅದ್ಭುತಗಳನ್ನು ಸೂಚಕಕಾರ್ಯಗಳೆಂದು ಕರೆಯುತ್ತಾನೆ. ಇದೂ ಸಹ ಅದ್ಭುತವಾದ ಘಟನೆಗಳಾಗಿದ್ದು, ಯೇಸುವು ಮೆಸ್ಸೀಯನು ಅಂದರೆ ಬರಬೇಕಾದ ರಕ್ಷಕನೆಂಬ ವಾಸ್ತವಾಂಶವನ್ನು ಸೂಚಿಸುತ್ತದೆ. ಮೇಲೆ ತಿಳಿಸಿರುವ ಮೂರು ಘಟನೆಗಳ ಸಂದರ್ಭದಲ್ಲಿ ಜನರು ನಂಬಿಕೆಯಿಂದ ಆತನನ್ನು ಅಂಗೀಕರಿಸಿದ ಉದಾಹರಣೆಗಳನ್ನು ಕಾಣುತ್ತೇವೆ. ಅವರ ಮಾದರಿಯು ನಾವೂ ಸಹ ಅವರನ್ನು ಅನುಸರಿಸಬೇಕೆಂದು ಆಹ್ವಾನಿಸುತ್ತವೆ.
20 changes: 20 additions & 0 deletions src/kn/2024-04/01/02.md
Original file line number Diff line number Diff line change
@@ -0,0 +1,20 @@
---
title: ಕಾನಾ ಊರಿನ ಮದುವೆ
date: 29/09/2024
---

`ಯೋಹಾನ 2:1-11ನೇ ವಚನಗಳನ್ನು ಓದಿರಿ. ಕಾನಾ ಊರಿನಲ್ಲಿ ಯೇಸು ಯಾವ ಸೂಚಕ ಕಾರ್ಯ ಮಾಡಿದನು? ಶಿಷ್ಯರು ಆತನ ಮೇಲೆ ನಂಬಿಕೆಯಿಡಲು ಇದು ಹೇಗೆ ಸಹಾಯವಾಯಿತು?`

ಕಾನಾ ಊರಿನ ಮದುವೆಯಲ್ಲಿ ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಅದ್ಭುತ ಕಾರ್ಯವನ್ನು ನೋಡಿದ ಶಿಷ್ಯರು ಆತನನ್ನು ಹಿಂಬಾಲಿಸಲು ನಿರ್ಧರಿಸಿದರು. ಯೇಸುವು ದೇವರಿಂದ ಕಳುಹಿಸಲ್ಪಟ್ಟವನೆಂಬುದಕ್ಕೆ ಇದಕ್ಕಿಂತ ಬಲವಾದ ಬೇರೆ ಯಾವ ಸಾಕ್ಷ್ಯಾಧಾರ ಬೇಕಾಗಿತ್ತು? ಆತನು ದೇವರೆಂದು ಅಂಗೀಕರಿಸಿಕೊಳ್ಳಲು ಶಿಷ್ಯರು ಬಹುಶಃ ಇನ್ನೂ ಸಿದ್ಧರಿರಲಿಲ್ಲ.

ಮೋಶೆಯು ಇಸ್ರಾಯೇಲ್ಯರ ಮಹಾನಾಯಕನಾಗಿದ್ದನು. ಅವನು ಅನೇಕ ಅದ್ಭುತ ಕಾರ್ಯಗಳು ಹಾಗೂ ಸೂಚಕಕಾರ್ಯಗಳನ್ನು ಮಾಡುವುದರ ಮೂಲಕ ಅವರನ್ನು ಐಗುಪ್ತದೇಶದ ದಾಸತ್ವದಿಂದ ಬಿಡಿಸಿದನು (ಧರ್ಮೋಪದೇಶಕಾಂಡ 6:22, 26:8). ಅವನ ಮೂಲಕ ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿದನು.

ದೇವರು ಮೋಶೆಯ ಮೂಲಕ ಅವನಂತೆಯೇ ಮತ್ತೊಬ್ಬ ಪ್ರವಾದಿಯನ್ನು ನೇಮಿಸುವೆನೆಂದು ತಿಳಿಸಿದನು. ಆತನಿಗೆ ನೀವು ಕಿವಿಗೊಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು (ಧರ್ಮೋಪದೇಶಕಾಂಡ 6:22; ಮತ್ತಾಯ 17:5 ಹಾಗೂ ಅ.ಕೃತ್ಯಗಳು 7:27). ಆ ಪ್ರವಾದಿಯು ಯೇಸುಕ್ರಿಸ್ತನಾಗಿದ್ದನು. ಕಾನಾ ಊರಿನ ಮದುವೆಯಲ್ಲಿ ಆತನು ತನ್ನ ಮೊದಲನೆ ಸೂಚಕ ಕಾರ್ಯಮಾಡಿದನು. ಈ ಅದ್ಭುತಕಾರ್ಯವು ಐಗುಪ್ತ ದೇಶದಿಂದ ಇಸ್ರಾಯೇಲ್ಯರನ್ನು ಬಿಡುಗಡೆಗೊಳಿಸಿದ್ದನ್ನು ಸೂಚಿಸುತ್ತದೆ.

ನೈಲ್‌ನದಿಯು ಐಗುಪ್ತ್ಯರಿಗೆ ನೀರಿಗೆ ಮುಖ್ಯವಾದ ಮೂಲಾಧಾರವೂ ಮತ್ತು ಅವರ ದೇವತೆಯೂ ಸಹ ಆಗಿತ್ತು. ಐಗುಪ್ತ್ಯರಿಗೆ ಬಂದ ಮೊದಲನೆ ಉಪದ್ರವವು ನೀರಿಗೆ ಸಂಬಂಧಪಟ್ಟಿತ್ತು. ನೈಲ್ ನದಿಯ ನೀರು ರಕ್ತವಾಯಿತು. ಕಾನಾ ಊರಲ್ಲಿಯೂ ಸಹ ಕ್ರಿಸ್ತನು ಇದೇ ರೀತಿಯಾದ ಸೂಚಕ ಕಾರ್ಯಮಾಡಿದನು. ಆದರೆ ಆತನು ನೀರನ್ನು ರಕ್ತವಾಗುವುದಕ್ಕೆ ಬದಲಾಗಿ ದ್ರಾಕ್ಷಾರಸವನ್ನಾಗಿ ಬದಲಾಯಿಸಿದನು.

ಮದುವೆ ಮನೆಯಲ್ಲಿಟ್ಟಿದ್ದ ಆರು ಕಲ್ಲಿನ ಬಾನೆಗಳು ಯೆಹೂದ್ಯರ ಶುದ್ಧಚಾರದ ಪ್ರಕಾರ ಶುದ್ಧೀಕರಣಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಇದು ಈ ಅದ್ಭುತ ಕಾರ್ಯವನ್ನು ರಕ್ಷಣಾಕಾರ್ಯದೊಂದಿಗೆ ನಿಕಟ ಸಂಬಂಧ ಕಲ್ಪಿಸುತ್ತದೆ. ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಘಟನೆಯನ್ನು ನಿರೂಪಿಸುವುದರ ಮೂಲಕ, ಯೋಹಾನನು ಯೇಸುಕ್ರಿಸ್ತನು ನಮ್ಮ ವಿಮೋಚಕನೆಂದು ಸೂಚಿಸುತ್ತಾನೆ.

ಯೇಸುಸ್ವಾಮಿಯು ಒದಗಿಸಿಕೊಟ್ಟ ಹುಳಿಯಿಲ್ಲದ ಆ ದ್ರಾಕ್ಷಾರಸದ ಬಗ್ಗೆ ಔತಣದ ಪಾರುಪತ್ಯಗಾರನು ಏನೆಂದು ಯೋಚಿಸಿದನು? ಅದರ ಉತ್ಕೃಷ್ಟವಾದ ರುಚಿ ಹಾಗೂ ಗುಣಮಟ್ಟದ ಬಗ್ಗೆ ಅವನಿಗೆ ಖಂಡಿತವಾಗಿಯೂ ಆಶ್ಚರ್ಯವಾಯಿತು. ಯೇಸುಸ್ವಾಮಿಯು ಈ ಸೂಚಕಕಾರ್ಯ ಮಾಡಿದ್ದಾನೆಂದು ತಿಳಿಯದ ಈ ಪಾರುಪತ್ಯಗಾರನು ಹಿಂದಿನ ಅಂದರೆ ಉತ್ತಮವಾದ ದ್ರಾಕ್ಷಾರಸವನ್ನು ಕೊನೆಯಲ್ಲಿ ಕೊಡಲು ಇಟ್ಟುಕೊಂಡಿದ್ದಾರೆಂದು ತಿಳಿದನು. ಯೇಸುಸ್ವಾಮಿ ಮಾಡಿದ ಅದ್ಭುತ ಕಾರ್ಯದ ದ್ರಾಕ್ಷಾರಸವು ಮದ್ಯಪಾನವಾಗಿರಲಿಲ್ಲ. ಆದರೆ ಈ ಕಾರ್ಯವನ್ನು ಕಣ್ಣಾರೆ ನೋಡಿದ ಕೆಲಸಗಾರರು ಅದರಿಂದ ಆಶ್ಚರ್ಯಗೊಂಡಿದ್ದರೆಂಬುದರಲ್ಲಿ ಸಂಶಯವಿಲ್ಲ.

`ನೀವು ಯೇಸುವಿನ ಹಿಂಬಾಲಕರಾಗಿರುವುದಕ್ಕೆ ಕಾರಣಗಳೇನು?`
20 changes: 20 additions & 0 deletions src/kn/2024-04/01/03.md
Original file line number Diff line number Diff line change
@@ -0,0 +1,20 @@
---
title: ಗಲಿಲಾಯದಲ್ಲಿ ಯೇಸು ಮಾಡಿದ ಎರಡನೇ ಸೂಚಕಕಾರ್ಯ
date: 30/09/2024
---

ಯೇಸುಕ್ರಿಸ್ತನು ತನ್ನ ಸುವಾರ್ತಾಸೇವೆಯಲ್ಲಿ ತನ್ನನ್ನು ಜನರು ನಂಬುವಂತೆ ಸಹಾಯಕವಾಗುವ ಅದ್ಭುತ ಕಾರ್ಯಗಳನ್ನು ಮಾಡಿದನು. ನಾವೂ ಸಹ ಆತನನ್ನು ನಂಬುವಂತೆ ಯೋಹಾನನು ಇವುಗಳನ್ನು ತನ್ನ ಸುವಾರ್ತೆಯಲ್ಲಿ ಬರೆದಿದ್ದಾನೆ.

`ಯೋಹಾನ 4:46-54ನೇ ವಚನಗಳನ್ನು ಓದಿರಿ. ಇಲ್ಲಿ ಯೋಹಾನನು ಯೇಸುವು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಅದ್ಭುತ ಕಾರ್ಯದೊಂದಿಗೆ ಯಾಕೆ ಸಂಬಂಧ ಕಲ್ಪಿಸುತ್ತಾನೆ?`

ಯೇಸುವು ಗಲಿಲಾಯದ ಕಪೆರ್ನೌಮಿನಲ್ಲಿ ಮಾಡಿದ ಎರಡನೇ ಸೂಚಕ ಕಾರ್ಯವನ್ನು ತಿಳಿಸುವಾಗ, ಆತನು ಕಾನಾ ಊರಲ್ಲಿ ಮದುವೆಯ ಮನೆಯಲ್ಲಿ ಯೋಹಾನನು ಮಾಡಿದ ಮೊದಲನೆ ಸೂಚಕಕಾರ್ಯವನ್ನೂ ಸಹ ತಿಳಿಸುತ್ತಾನೆ.

ಯೇಸುವು ಮಾಡಿದ ಸೂಚಕಕಾರ್ಯಗಳು ಆತನು ಯಾರೆಂಬುದನ್ನು ತಿಳಿಯಲು ಸಹಾಯಮಾಡುತ್ತವೆಂಬುದನ್ನು ಬಹುಶಃ ಯೋಹಾನನು ಇಲ್ಲಿ ಹೇಳಲು ಪ್ರಯತ್ನಿಸುತ್ತಿರಬಹುದು. "ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಈ ಸೂಚಕಕಾರ್ಯವನ್ನು ಮಾಡಿದನು" ಎಂದು ಯೋಹಾನನು ತಿಳಿಸುತ್ತಾನೆ (ಯೋಹಾನ 4:54).

ಅರಮನೆಯ ಪ್ರಧಾನನಿಗೆ ಯೇಸು ಹೇಳಿದ ಮಾತುಗಳು ಮೊದಲು ನಮಗೆ ಬಹಳ ಕಠಿಣವಾಗಿದ್ದವೆಂದು ಅನಿಸಬಹುದು. ಆದಾಗ್ಯೂ, ಈ ಅಧಿಕಾರಿಯು ತನ್ನ ಮಗನು ಸ್ವಸ್ಥತೆ ಹೊಂದಿದಲ್ಲಿ ಮಾತ್ರ ಯೇಸುವಿನ ಮೇಲೆ ನಂಬಿಕೆಯಿಡುತ್ತೇನೆಂದು ನಿರ್ಣಯಿಸಿಕೊಂಡಿದ್ದನು. ಈ ಕಾರಣದಿಂದ ಆತನು ಪ್ರಧಾನನ ಮನಸ್ಸನ್ನು ಅರಿತುಕೊಂಡು ಅವನ ಆತ್ಮೀಕ ಕಾಯಿಲೆಯು ಅವನ ಮಗನ ಪ್ರಾಣಾಪಾಯ ತರುವಂತ ರೋಗಕ್ಕಿಂತಲೂ ಹೆಚ್ಚು ಗಂಭೀರವಾಗಿದೆ ಎಂದು ತಿಳಿದಿದ್ದನು. ಆಗ ಅರಮನೆಯ ಪ್ರಧಾನನು ತನ್ನ ಈ ಆತ್ಮೀಕ ಸಂದೇಹವು ತನ್ನ ಮಗನ ಪ್ರಾಣಹೋಗಲು ಕಾರಣವಾಗುತ್ತದೆಂದು ಮನವರಿಕೆ ಮಾಡಿಕೊಂಡನು.

ಅದ್ಭುತಕಾರ್ಯಗಳನ್ನು ಗುರುತಿಸುವುದು ಬಹಳ ಮುಖ್ಯ. ಆದರೆ ಅವುಗಳು ಯೇಸುವು ಮೆಸ್ಸೀಯನೆಂಬುದಕ್ಕೆ ಸಾಕ್ಷ್ಯಾಧಾರವಾಗಿರಲಿಲ್ಲ. ಬೇರೆಯವರೂ ಸಹ ಅದ್ಭುತಕಾರ್ಯಗಳನ್ನು ಮಾಡಿದ್ದಾರೆ. ಅವರಲ್ಲಿ ಕೆಲವರು ನಿಜಪ್ರವಾದಿಗಳು, ಬೇರೆ ಕೆಲವರು ಸುಳ್ಳು ಪ್ರವಾದಿಗಳು. ಮಾನವರಿಗೂ ಹಾಗೂ ಪ್ರಕೃತಿಯ ಶಕ್ತಿಗಳು ಮತ್ತು ನಿಯಮಗಳಿಗೆ ಮೀರಿದ ಅಲೌಕಿಕವಾದ (Super Natural) ಶಕ್ತಿಯೊಂದು ಅಸ್ತಿತ್ವದಲ್ಲಿದೆ ಎಂಬುದನ್ನು ಮಾತ್ರ ಅದ್ಭುತಕಾರ್ಯಗಳು ತೋರಿಸುತ್ತವೆಯೇ ಹೊರತು, ಅದನ್ನು ದೇವರೇ ಮಾಡುತ್ತಾನೆಂಬುದನ್ನು ದೃಢಪಡಿಸುವುದಿಲ್ಲ. ಸುಳ್ಳು ಪ್ರವಾದಿಗಳು, ಸೈತಾನನೂ, ಸಹ ಅದ್ಭುತ ಕಾರ್ಯಗಳನ್ನು ಮಾಡುತ್ತಾರೆಂಬುದನ್ನು ಮರೆಯಬಾರದು.

ಅರಮನೆಯ ಪ್ರಧಾನನು ತನ್ನ ಮಗನ ಅವಸ್ಥೆಯಿಂದ ಬಹುದುಃಖಿತನಾಗಿ ಯೇಸುವು ಕರುಣೆ ತೋರಿಸಿ ತನ್ನ ಮಗನನ್ನು ಬದುಕಿಸಬೇಕೆಂದು ಬೇಡಿಕೊಂಡನು. ಆಗ ಯೇಸು ಅವನಿಗೆ- "ನಿನ್ನ ಮಗನು ಬದುಕುತ್ತಾನೆ, ಹೋಗು" (ಯೋಹಾನ 4:50) ಎಂದು ಹೇಳಿದ ಮಾತು ಅವನಲ್ಲಿ ಭರವಸೆ ಹುಟ್ಟಿಸಿತು. ಯೇಸುವಿನ ಮಾತನ್ನು ನಂಬಿದ ಪ್ರಧಾನನು ತನ್ನ ಮನೆಗೆ ಶೀಘ್ರದಲ್ಲಿಯೇ ಹಿಂದಿರುಗದೆ, ಅದರ ಮರುದಿನ ಹೋದನು. ನಿನ್ನ ಮಗನು ಬದುಕುತ್ತಾನೆಂದು ಯೇಸು ಹೇಳಿದ ತಾಸಿನಲ್ಲಿಯೇ ಈ ಅದ್ಭುತ ಕಾರ್ಯ ನಡೆಯಿತೆಂದು ಪ್ರಧಾನನು ತಿಳಿದುಕೊಂಡು ಅವನ ಮನೆಯವರೊಂದಿಗೆ ಯೇಸುವನ್ನು ನಂಬಿದನು. ಇದು ಕ್ರಿಸ್ತನನ್ನು ನಂಬುವುದಕ್ಕೆ ಎಂತಹ ಬಲವಾದ ಕಾರಣವಾಗಿದೆಯಲ್ಲವೇ!

`ಯಾರೋ ಒಬ್ಬವ್ಯಕ್ತಿ ಒಂದು ಅದ್ಭುತ ಕಾರ್ಯಮಾಡಿದ್ದನ್ನು ನೀವು ನೋಡಿದ್ದೀರೆಂದು ಊಹಿಸಿಕೊಳ್ಳಿ ಆದಾಗ್ಯೂ, ಇದು ದೇವರಿಂದಲೇ ಆಯಿತೆಂಬುದನ್ನು ತಿಳಿದುಕೊಳ್ಳುವುದಕ್ಕೆ ಮೊದಲು ಬೇರೆ ಯಾವ ಮಾನದಂಡವನ್ನು (Criteria) ನಾವು ಗಮನಿಸಬೇಕು?`
Loading

0 comments on commit 63028c3

Please sign in to comment.